ರಾಜ್ಯೋತ್ಸವ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭ-ಚಿಂಚಣಿ ತಾ:ಚಿಕ್ಕೋಡಿ

ರಾಜ್ಯೋತ್ಸವ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭ-ಚಿಂಚಣಿ ತಾ:ಚಿಕ್ಕೋಡಿ

02-11-2022 ರಂದು ಸಿದ್ಧಪ್ರಭು ಕನ್ನಡ ಭವನ ಚಿಂಚಣಿ ತಾ:ಚಿಕ್ಕೋಡಿ ಇಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವೆನಿಸುತ್ತದೆ. ಶ್ರೀ.ಮ.ನಿ.ಪ್ರ.ಅಲ್ಲಮಪ್ರಭು ಮಹಾಸ್ವಾಮಿಗಳು ಸಿದ್ಧ ಸಂಸ್ಥಾನಮಠ ಚಿಂಚಣಿ ಹಾಗೂ ಶ್ರೀ.ಮ.ನಿ.ಪ್ರ.ಸಂಪಾದನಾ ಮಹಾಸ್ವಾಮಿಗಳು, ಸಂಪಾದನಾ ಚರಮೂರ್ತಿಮಠ ಚಿಕ್ಕೋಡಿ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ದೊಡ್ಡಣ್ಣ ಎಸ್, ಕನ್ನಡ ಚಲನಚಿತ್ರ ಖ್ಯಾತ ನಟರು, ಶ್ರೀ ಮಹಾಂತೇಶ ಕವಟಗಿಮಠ, ಮಾಜಿ ವಿಧಾನಪರಿಷತ್ ಸದಸ್ಯರು, ಶ್ರೀ ಜಗದೀಶ ಕವಟಗಿಮಠ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ಬೆಂಗಳೂರು, ಶ್ರೀಮತಿ ಪ್ರೇಮಾ ಸಂಜೀವಕುಮಾರ ಅಪ್ಪಾಜಿಗೋಳ ಅಧ್ಯಕ್ಷರು, ಗ್ರಾಮ ಪಂಚಾಯತ ಚಿಂಚಣಿ, ಇತರೆ ಗಣ್ಯರು ಭಾಗವಹಿಸಿದ್ದರು.

Share this post