ಬೆಳಗಾವಿಯ ಕನ್ನಡ ಭವನದಲ್ಲಿ ಭವ್ಯ ಹವಾನಿಯಂತ್ರಿತ ರಂಗಮಂದಿರ ಉದ್ಘಾಟನೆ-27th Dec 2022
ಗಡಿಭಾಗ ಬೆಳಗಾವಿಯಲ್ಲಿ ಕನ್ನಡ ಭವನ ನೂತನ ರಂಗಮಂದಿರದ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಗದಗ ತೋಂಟದಾರ್ಯ ಜಗದ್ಗುರು ಜಗದ್ಗುರು ಶ್ರೀಮಠದ ಸಿದ್ದರಾಮ ಮಹಾ ಸ್ವಾಮೀಜಿ, ನಿಡಸೋಶಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಗೋವಿಂದ ಕಾರಜೋಳ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ, ಸಂಸದರಾದ ಶ್ರೀಮತಿ ಮಂಗಳ ಸುರೇಶ್ ಅಂಗಡಿ, ಹಾಗೂ ಚಲನಚಿತ್ರ ನಟಿ ಶ್ರೀಮತಿ ಗಿರಿಜಾ ಲೋಕೇಶ್, ಶಾಸಕರಾದ ಶ್ರೀ ಅನಿಲ್ ಬೆನಕೆ, ಶ್ರೀ ಅಭಯ್ ಪಾಟೀಲ್, ಮಾಂತೇಶ್ ಕವಟಿಗಿಮಠ ವೇದಿಕೆ ಮೇಲೆ ಉಸಿತರಿದ್ದರು.